ನ್ಯೂ ಟೌನ್, ಭದ್ರಾವತಿ.
08282-271925
ಇಮೇಲ್ : govt_vissj@rediffmail.com


ವಿ ಐ ಎಸ್ ಎಸ್ ಜೆ ( ವಿಶ್ವೇಶ್ವರಯ್ಯಾ ಐರನ್ ಮತ್ತು ಸ್ಟೀಲ್ ಸಿಲ್ವರ್ ಜುಬ್ಲೀ ) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸರ್ಕಾರಿ ಪಾಲಿಟೆಕ್ನಿಕ್ ಭದ್ರಾವತಿ ಪಾಲಿಟೆಕ್ನಿಕ್ ಕೈಗಾರಿಕಾ ಪಟ್ಟಣ ಶಿವಮೊಗ್ಗ ಜಿಲ್ಲೆಯಲ್ಲಿರುವ ಕರ್ನಾಟಕದ ಪ್ರಮುಖ ತಾಂತ್ರಿಕ ಸಂಸ್ಥೆಯಾಗಿದೆ. ಇದನ್ನು 1950 ರಲ್ಲಿ ಸ್ಥಾಪಿಸಲಾಯಿತು. ಈ ಕಾಲೇಜು 5.39 ಎಕರೆ ಪ್ರದೇಶದಲ್ಲಿದೆ. ಭದ್ರಾವತಿ ಎರಡು ದೊಡ್ಡ ಕೈಗಾರಿಕೆಗಳು “ವಿ ಐ ಎಸ್ ಎಲ್” ಮತ್ತು “ಎಂ ಪಿ ಎಂ” ಗೆ ಹೆಸರುವಾಸಿಯಾಗಿದೆ. ಸರ್ಕಾರ ವಿ ಐ ಎಸ್ ಎಸ್ ಜೆ ಪಾಲಿಟೆಕ್ನಿಕ್ ಎಂಬುದು ಕರ್ನಾಟಕ ಸರ್ಕಾರವು ನಡೆಸುತ್ತಿರುವ ಎ ಐ ಸಿ ಟಿ ಇ ಅನುಮೋದಿತ ಸಂಸ್ಥೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ಎಲ್ಲಾ ಮೂಲಸೌಕರ್ಯದೊಂದಿಗೆ ಅರ್ಹ ಸಿಬ್ಬಂದಿಯಿಂದ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ.

ಈ ಪಾಲಿಟೆಕ್ನಿಕ್‍ನಲ್ಲಿ ಕೆಳಕಂಡ ಡಿಪ್ಲೋಮಾ ಕೋರ್ಸ್‍ಗಳನ್ನು ನಡೆಸಲಾಗುತ್ತಿದೆ.

  • • ಯಾಂತ್ರಿಕ ವಿಭಾಗ (ಮೆಕಾನಿಕಲ್ ಇಂಜಿನಿಯರಿಂಗ್)
  • • ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್)
  • • ಕಾಮಗಾರಿ ವಿಭಾಗ (ಸಿವಿಲ್ ಇಂಜಿನಿಯರಿಂಗ್)
  • • ಲೋಹಶಾಸ್ತ್ರ ವಿಭಾಗ (ಮೆಟಲರ್ಜಿ)ಸುತ್ತೋಲೆಗಳು